ಒಂದು

ಡಿಮ್ಯಾಟ್ ಅಕೌಂಟ್

,
ಕೊನೆಯಿಲ್ಲದ ಅವಕಾಶಗಳು!
  • ಶೂನ್ಯ*

    AMC

  • ಫ್ಲಾಟ್

    20

    ಬ್ರೋಕರೇಜ್

  • 45 ಲಕ್ಷ+ ಗ್ರಾಹಕರು
  • 4.3 ಆ್ಯಪ್‌ ರೇಟಿಂಗ್
  • 20.7 M + ಆ್ಯಪ್‌ ಇನ್‌ಸ್ಟಾಲ್‌ಗಳು
ಉಚಿತ ಡಿಮ್ಯಾಟ್ ಅಕೌಂಟ್ ತೆರೆಯಿರಿ
+91
''
''
ಮುಂದುವರೆಯುವ ಮೂಲಕ, ನೀವು ಎಲ್ಲಾ ನಿಯಮ ಮತ್ತು ಷರತ್ತುಗಳನ್ನು* ಒಪ್ಪಿಕೊಳ್ಳುತ್ತೀರಿ
ಮೊಬೈಲ್ ನಂಬರ್ ಇದಕ್ಕೆ ಸೇರಿದೆ
hero_form
ಮ್ಯೂಚುಯಲ್ ಫಂಡ್ಸ್
0ಕಮಿಷನ್

ನಿಮ್ಮ ಉಚಿತ ಡಿಮ್ಯಾಟ್ ಅಕೌಂಟ್ ತೆರೆಯಿರಿ

5 ನಿಮಿಷಗಳಲ್ಲಿ*
ಪ್ರಶಸ್ತಿಗಳು ಮತ್ತು ಮನ್ನಣೆ
2022

ಲೀಡಿಂಗ್ ಮೆಂಬರ್ - ಕ್ಲೈಂಟ್ ಬಿಸಿನೆಸ್ ಬೈ MCX ಅವಾರ್ಡ್ಸ್

2022

ದಿ ಗ್ರೇಟ್ ಇಂಡಿಯನ್ BFSI ಪ್ರಶಸ್ತಿಗಳು

2022

ಸಿಲ್ವರ್ ಡಿಜಿಕ್ಸ್ ಪ್ರಶಸ್ತಿಗಳು 2022

2022

ಕೆಲಸ ಮಾಡಲು ಉತ್ತಮ ಸ್ಥಳ ಪ್ರಮಾಣೀಕೃತ

2021

ಅತ್ಯುತ್ತಮ ಬ್ರ್ಯಾಂಡ್ ಎಕನಾಮಿಕ್ ಟೈಮ್ಸ್

ನಮ್ಮ ಬಳಕೆದಾರರು ಏನು ಹೇಳುತ್ತಾರೆ

ಡಿಮ್ಯಾಟ್ ಅಕೌಂಟ್ ಎಂದರೇನು?

ಡಿಮೆಟೀರಿಯಲೈಸ್ಡ್ ಅಕೌಂಟ್ ಎಂದೂ ಕರೆಯಲ್ಪಡುವ ಡಿಮ್ಯಾಟ್ ಅಕೌಂಟ್, ಬಾಂಡ್‌ಗಳು, ಮ್ಯೂಚುಯಲ್ ಫಂಡ್ಸ್, ಷೇರುಗಳು ಮತ್ತು ಎಕ್ಸ್‌ಚೇಂಜ್-ಟ್ರೇಡೆಡ್ ಫಂಡ್‌ಗಳಂತಹ (ETF ಗಳು) ಹಣಕಾಸಿನ ಪ್ರಾಡಕ್ಟ್‌ಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇರಿಸಲು ನಿಮಗೆ ಅನುವು ಮಾಡಿಕೊಡುವ ಎಲೆಕ್ಟ್ರಾನಿಕ್ ವೇದಿಕೆಯಾಗಿದೆ. ಖರೀದಿ ಸಮಯದಲ್ಲಿ ಸ್ಟಾಕ್‌ಗಳನ್ನು ನಿಮ್ಮ ಡಿಮ್ಯಾಟ್ ಅಕೌಂಟ್‌ಗೆ ಡೆಪಾಸಿಟ್ ಮಾಡಲಾಗುತ್ತದೆ ಮತ್ತು ಮಾರಾಟದ ನಂತರ ಸೆಕ್ಯೂರಿಟಿಗಳನ್ನು ಅದರಿಂದ ಕಡಿತಗೊಳಿಸಲಾಗುತ್ತದೆ. ಹೆಚ್ಚು ತಡೆರಹಿತ ಟ್ರೇಡಿಂಗ್ ಅನುಭವಕ್ಕಾಗಿ, ಟ್ರೇಡಿಂಗ್ ಅಕೌಂಟ್ ಅನ್ನು ನಿಮ್ಮ ಬ್ಯಾಂಕ್ ಅಕೌಂಟ್ ಮತ್ತು ಪ್ರತ್ಯೇಕ ಡಿಮ್ಯಾಟ್ ಅಕೌಂಟ್‌ನೊಂದಿಗೆ ಸಂಯೋಜಿಸುವ 3-in-1್<an2> ಅಕೌಂಟ್ ಅನ್ನು ನೀವು ಆಯ್ಕೆ ಮಾಡಬಹುದು.

ಡಿಮ್ಯಾಟ್ ಅಕೌಂಟ್ ವಿಧಗಳು

ವಿವಿಧ ಹೂಡಿಕೆದಾರರ ಅಗತ್ಯಗಳನ್ನು ಪೂರೈಸುವ ವಿವಿಧ ರೀತಿಯ ಡಿಮ್ಯಾಟ್ ಅಕೌಂಟ್‌ಗಳನ್ನು ಇಲ್ಲಿ ನೋಡಿ`:

  • ರೆಗ್ಯುಲರ್ ಡಿಮ್ಯಾಟ್ ಅಕೌಂಟ್

    ಇದು ಭಾರತೀಯ ನಾಗರಿಕರು ಇಕ್ವಿಟಿಗಳು, ಷೇರುಗಳು ಮತ್ತು ಸೆಕ್ಯೂರಿಟಿಗಳನ್ನು ಟ್ರೇಡ್ ಮಾಡಲು ಬಳಸುವ ಅತ್ಯಂತ ಜನಪ್ರಿಯ ಡಿಮ್ಯಾಟ್ ಅಕೌಂಟ್ ಆಗಿದೆ. ಫ್ಯೂಚರ್ಸ್ ಮತ್ತು ಆಪ್ಶನ್ಸ್ ಟ್ರೇಡಿಂಗ್‌ ಸಾಮಾನ್ಯವಾಗಿ ಟ್ರೇಡಿಂಗ್ ಅಕೌಂಟ್ ಅನ್ನು ಅಗತ್ಯವಾಗಿಸುತ್ತವೆ. ಸೇವಾ ಪೂರೈಕೆದಾರರು ಈ ರೀತಿಯ ಅಕೌಂಟ್‌ಗೆ ವಾರ್ಷಿಕ ನಿರ್ವಹಣಾ ಶುಲ್ಕವನ್ನು (AMC) ವಿಧಿಸುತ್ತಾರೆ. ಆದಾಗ್ಯೂ, ಸಣ್ಣ ಹೂಡಿಕೆದಾರರಿಗಾಗಿ SEBI ಬೇಸಿಕ್ ಸರ್ವಿಸಸ್ ಡಿಮ್ಯಾಟ್ ಅಕೌಂಟ್ (BSDA) ಅನ್ನು ಅಭಿವೃದ್ಧಿಪಡಿಸಿದ್ದು, ಇದು ಹೂಡಿಕೆ ಮೊತ್ತದ ಆಧಾರದ ಮೇಲೆ AMC ಗಳನ್ನು ಕಡಿಮೆ ಮಾಡುವುದರಿಂದ ಅಥವಾ ನಿವಾರಿಸುವುದರಿಂದ ಸಣ್ಣ ಹೋಲ್ಡಿಂಗ್‌ಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಇದು ಹೆಚ್ಚು ವೆಚ್ಚ-ಪರಿಣಾಮಕಾರಿಯಾಗಿದೆ.

  • BSDA - ಬೇಸಿಕ್ ಸರ್ವಿಸ್ ಡಿಮ್ಯಾಟ್ ಅಕೌಂಟ್

    ಬೇಸಿಕ್ ಸರ್ವಿಸಸ್ ಡಿಮ್ಯಾಟ್ ಅಕೌಂಟ್‌ಗಳು ಆರಂಭಿಕ ಅಥವಾ ಸಣ್ಣ ಹೂಡಿಕೆದಾರರಿಗೆ ಪರಿಪೂರ್ಣವಾಗಿವೆ. ₹2 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಸ್ವತ್ತುಗಳಿಗೆ ಈ ಅಕೌಂಟ್, ಕಡಿಮೆ ನಿರ್ವಹಣಾ ಶುಲ್ಕವನ್ನು ಒದಗಿಸುತ್ತದೆ ಮತ್ತು ಇದು ಹೊಸ ಹೂಡಿಕೆದಾರರಿಗೆ ವೆಚ್ಚ-ಪರಿಣಾಮಕಾರಿ ಪರಿಹಾರವಾಗಿದೆ.

  • ರಿಪಾಟ್ರಿಯೆಬಲ್ ಡಿಮ್ಯಾಟ್ ಅಕೌಂಟ್

    ಈ ರೀತಿಯ ಡಿಮ್ಯಾಟ್ ಅಕೌಂಟ್ ಅನ್ನು ಅನಿವಾಸಿ ಭಾರತೀಯರಿಗೆ (NRI ಗಳು) ವಿನ್ಯಾಸಗೊಳಿಸಲಾಗಿದೆ ಮತ್ತು ಅವರಿಗೆ ಭಾರತೀಯ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮತ್ತು ವಿದೇಶಕ್ಕೆ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಇದು NRE (ಅನಿವಾಸಿ ಬಾಹ್ಯ) ಅಕೌಂಟ್‌ಗೆ ಕನೆಕ್ಟ್ ಆಗಿದ್ದು, NRI ಗಳಿಗೆ ಪ್ರತಿ ವರ್ಷ ಒಂದು ಮಿಲಿಯನ್ US ಡಾಲರ್‌ಗಳವರೆಗೆ ವಾಪಸ್ ಕಳುಹಿಸಲು ಅನುವು ಮಾಡಿಕೊಡುತ್ತದೆ.

  • ನಾನ್-ರಿಪಾಟ್ರಿಯೆಬಲ್ ಡಿಮ್ಯಾಟ್ ಅಕೌಂಟ್

    NRI ಗಳಿಗೆ, ಈ ಅಕೌಂಟ್ NRO (ಅನಿವಾಸಿ ಸಾಮಾನ್ಯ) ಅಕೌಂಟ್‌ಗೆ ಕನೆಕ್ಟ್ ಆಗಿದೆ. ಆದಾಗ್ಯೂ, ರಿಪಾಟ್ರಿಯಬಲ್ ಅಕೌಂಟ್‌ನಂತಲ್ಲದೆ, ಹಣವನ್ನು ಭಾರತದಿಂದ ಹೊರಗೆ ವರ್ಗಾಯಿಸಲಾಗುವುದಿಲ್ಲ. ಈ ಅಕೌಂಟ್ NRI ಗಳಿಗೆ ತಮ್ಮ ಹಣವನ್ನು ದೇಶದೊಳಗೆ ಇರಿಸಲು ಭಾರತೀಯ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ.

ಡಿಮ್ಯಾಟ್ ಅಕೌಂಟ್ ತೆರೆಯುವುದು ಹೇಗೆ?

5paisa ದೊಂದಿಗೆ ಡಿಮ್ಯಾಟ್ ಅಕೌಂಟ್ ತೆರೆಯುವುದು ಸರಳ ಮತ್ತು ಅನುಕೂಲಕರವಾಗಿದೆ. ಕೆಲವೇ ಸುಲಭ ಹಂತಗಳಲ್ಲಿ ನೀವು ಹೇಗೆ ಪ್ರಾರಂಭಿಸಬಹುದು ಎಂಬುದು ಇಲ್ಲಿದೆ:

  • 5paisa ಆ್ಯಪನ್ನು ಡೌನ್ಲೋಡ್ ಮಾಡಿ

    ಆ್ಯಪಲ್ ಆ್ಯಪ್ ಸ್ಟೋರ್ ಅಥವಾ ಗೂಗಲ್ ಪ್ಲೇಸ್ಟೋರ್‌ನಿಂದ 5 paisa ಆ್ಯಪ್ ಡೌನ್ಲೋಡ್ ಮಾಡಿ. ಈ ಆ್ಯಪ್ ಉಚಿತ ಡಿಮ್ಯಾಟ್ ಅಕೌಂಟ್ ತೆರೆಯುವ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತದೆ.

  • 'ಡಿಮ್ಯಾಟ್ ಅಕೌಂಟ್ ತೆರೆಯಿರಿ' ಆಯ್ಕೆಯನ್ನು ಆರಿಸಿ

    ಆ್ಯಪ್‌ ಒಳಗೆ, ಪ್ರಕ್ರಿಯೆಯನ್ನು ಆರಂಭಿಸಲು 'ಡಿಮ್ಯಾಟ್ ಅಕೌಂಟ್ ತೆರೆಯಿರಿ' ಆಯ್ಕೆಯನ್ನು ಆರಿಸಿ.

  • 5paisa ಪ್ರತಿನಿಧಿಯಿಂದ ಸಹಾಯ ಪಡೆಯಿರಿ

    ಆಯ್ಕೆಯನ್ನು ಆರಿಸಿದ ನಂತರ, 5paisa ಪ್ರತಿನಿಧಿಯು ನಿಮಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಾಯ ಮಾಡಲು ಮತ್ತು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿಮ್ಮನ್ನು ಸಂಪರ್ಕಿಸುತ್ತಾರೆ.

  • ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು KYC ವೆರಿಫೈ ಮಾಡಿ

    ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ಮತ್ತು ನಿಮ್ಮ KYC (ನಿಮ್ಮ ಗ್ರಾಹಕರನ್ನು ತಿಳಿಯಿರಿ) ವೆರಿಫಿಕೇಶನ್ ಪೂರ್ಣಗೊಳಿಸಲು ನೀಡಲಾದ ಮಾರ್ಗದರ್ಶನವನ್ನು ಅನುಸರಿಸಿ. ಅದು ಮುಗಿದ ನಂತರ, ನಿಮ್ಮ ಡಿಮ್ಯಾಟ್ ಅಕೌಂಟ್ ಟ್ರೇಡಿಂಗ್‌ಗೆ ಸಿದ್ಧವಾಗುತ್ತದೆ!

ಡಿಮ್ಯಾಟ್ ಅಕೌಂಟ್ ತೆರೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಉಚಿತ ಡಿಮ್ಯಾಟ್ ಅಕೌಂಟ್ ತೆರೆಯಲು, ನೀವು ಕೆಲವು ಮೂಲಭೂತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ. ತ್ವರಿತ ಚೆಕ್‌ಲಿಸ್ಟ್ ಇಲ್ಲಿದೆ:

  • ಗುರುತಿನ ಪುರಾವೆ

    ಪಾಸ್‌ಪೋರ್ಟ್, ಆಧಾರ್, ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ID ಕಾರ್ಡ್‌ನಂತಹ ಸರ್ಕಾರ ನೀಡಿದ ID.

  • ವಿಳಾಸದ ಪುರಾವೆ

    ಇತ್ತೀಚಿನ ಯುಟಿಲಿಟಿ ಬಿಲ್, ಪಾಸ್‌ಪೋರ್ಟ್, ಆಧಾರ್, ಅಥವಾ ನಿಮ್ಮ ಸಂಗಾತಿಯ ವಿಳಾಸದ ಪುರಾವೆ.

  • ಆದಾಯದ ಪುರಾವೆ

    ಡಿರೈವೇಟಿವ್‌ಗಳ ಟ್ರೇಡಿಂಗ್‌ನಂತಹ ಕೆಲವು ಟ್ರಾನ್ಸಾಕ್ಷನ್‌ಗಳಿಗೆ ಅಗತ್ಯವಿದೆ. ಇದು ಸಂಬಳದ ಸ್ಲಿಪ್‌ಗಳು, ಆದಾಯ ತೆರಿಗೆ ರಿಟರ್ನ್ಸ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್‌ಗಳನ್ನು ಒಳಗೊಂಡಿರಬಹುದು.

  • ಬ್ಯಾಂಕ್ ಅಕೌಂಟ್ ಪುರಾವೆ

    ಡಿಮ್ಯಾಟ್ ಅಕೌಂಟ್‌ನೊಂದಿಗೆ ನಿಮ್ಮ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಲು ರದ್ದುಗೊಂಡ ಚೆಕ್ ಅಥವಾ ಇತ್ತೀಚಿನ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಸಲ್ಲಿಸಿ.

  • PAN ಕಾರ್ಡ್

    ತೆರಿಗೆ ಉದ್ದೇಶಗಳಿಗಾಗಿ ಮತ್ತು ನಿಮ್ಮ ಟ್ರೇಡಿಂಗ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಅಗತ್ಯವಾಗಿದೆ.

  • ಫೋಟೋಗ್ರಾಫ್‌ಗಳು

    ಬ್ರೋಕರ್ ಆಧಾರದ ಮೇಲೆ, ನೀವು ಇತ್ತೀಚಿನ 1-3 ಪಾಸ್‌ಪೋರ್ಟ್ ಸೈಜ್ ಫೋಟೋಗಳನ್ನು ಸಲ್ಲಿಸಬೇಕಾಗಬಹುದು.

  • ನಿರ್ದಿಷ್ಟ ಘಟಕಗಳಿಗೆ ಹೆಚ್ಚುವರಿ ಡಾಕ್ಯುಮೆಂಟ್‌ಗಳು

    ನೀವು NRI, ಕಂಪನಿ ಅಥವಾ HUF (ಹಿಂದೂ ಅವಿಭಕ್ತ ಕುಟುಂಬ) ಆಗಿ ಅಕೌಂಟ್ ತೆರೆಯುತ್ತಿದ್ದರೆ, ನೀವು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕಾಗಬಹುದು.

5paisa ದೊಂದಿಗೆ ಡಿಮ್ಯಾಟ್ ಅಕೌಂಟ್ ಏಕೆ ತೆರೆಯಬೇಕು?

5paisa ದಲ್ಲಿ ಡಿಮ್ಯಾಟ್ ಅಕೌಂಟ್ ತೆರೆಯುವುದು ಏಕೆ ಸುಗಮ, ವೆಚ್ಚ-ಪರಿಣಾಮಕಾರಿ ಮತ್ತು ಲಾಭದಾಯಕ ಟ್ರೇಡಿಂಗ್ ಅನುಭವವನ್ನು ನೀಡುತ್ತದೆ ಎಂಬುದು ಇಲ್ಲಿದೆ:

  • ಫ್ಲಾಟ್ ಬ್ರೋಕರೇಜ್ ಫೀಸ್

    ಫ್ಲಾಟ್ ₹20 ಬ್ರೋಕರೇಜ್ ಶುಲ್ಕದಲ್ಲಿ ಟ್ರೇಡಿಂಗ್‌ನ ಪ್ರಯೋಜನಗಳನ್ನು ಪಡೆಯಬಹುದಾದ್ದರಿಂದ, 5paisa ಅತ್ಯಂತ ವೆಚ್ಚ-ಪರಿಣಾಮಕಾರಿ ವೇದಿಕೆಗಳಲ್ಲಿ ಒಂದಾಗಿದೆ.

  • ಬಳಕೆದಾರ-ಸ್ನೇಹಿ ಇಂಟರ್ಫೇಸ್

    5paisa ದ ಸರಳ ಮತ್ತು ಅರ್ಥಪೂರ್ಣ ಪ್ಲಾಟ್‌ಫಾರ್ಮ್ ಹಣಕಾಸಿನ ಮಾರುಕಟ್ಟೆಗಳನ್ನು ಅರ್ಥೈಸಿಕೊಳ್ಳುವುದನ್ನು ಮತ್ತು ಆತ್ಮವಿಶ್ವಾಸದೊಂದಿಗೆ ಟ್ರೇಡ್ ಮಾಡುವುದನ್ನು ಸುಲಭಗೊಳಿಸುತ್ತದೆ.

  • ತ್ವರಿತ ಅಕೌಂಟ್ ಸೆಟಪ್

    ತೊಂದರೆ ರಹಿತ ಆನ್‌ಬೋರ್ಡಿಂಗ್ ಅನುಭವಕ್ಕಾಗಿ ಆಧಾರ್, eKYC ಮತ್ತು PAN-ಆಧಾರಿತ ಅಕೌಂಟ್ ಸೆಟಪ್‌ನೊಂದಿಗೆ ತ್ವರಿತವಾಗಿ ಪ್ರಾರಂಭಿಸಿ.

  • ಮಾಹಿತಿ ಪಡೆಯಿರಿ

    ಉತ್ತಮ, ಹೆಚ್ಚು ಮಾಹಿತಿಯುಕ್ತ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳಲು ರಿಯಲ್-ಟೈಮ್ ಅಪ್ಡೇಟ್‌ಗಳು, ಮಾರುಕಟ್ಟೆ ಸುದ್ದಿಗಳು ಮತ್ತು ಸ್ಟಾಕ್ ಫಿಲ್ಟರ್‌ಗಳನ್ನು ಪಡೆಯಿರಿ.

  • ಅಕ್ಸೆಸ್ ಮಾಡಬಹುದಾದ ಟ್ರೇಡಿಂಗ್

    ಆ್ಯಂಡ್ರಾಯ್ಡ್, iOS ಅಥವಾ ವೆಬ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತಡೆರಹಿತ ಅಕ್ಸೆಸ್‌ನೊಂದಿಗೆ ಮೊಬೈಲ್‌ನಲ್ಲಿ ಸುಲಭವಾಗಿ ಟ್ರೇಡ್ ಮಾಡಿ.

  • ವೈವಿಧ್ಯಮಯ ಹೂಡಿಕೆ ಅವಕಾಶಗಳು

    IPO ಗಳು, ಮ್ಯೂಚುಯಲ್ ಫಂಡ್‌ಗಳು, ಸ್ಟಾಕ್‌ಗಳು ಮತ್ತು ಇನ್ನೂ ಹೆಚ್ಚಿನ ಆಯ್ಕೆಗಳೊಂದಿಗೆ ಡಿಜಿಟಲ್ ಟ್ರೇಡಿಂಗ್‌ಗೆ ಬಾಗಿಲು ತೆರೆಯಿರಿ- ಎಲ್ಲವನ್ನೂ ನಿಮ್ಮ ಡಿಮ್ಯಾಟ್ ಅಕೌಂಟ್ ಮೂಲಕ ಅಕ್ಸೆಸ್ ಮಾಡಬಹುದು.

ಆಗಾಗ ಕೇಳುವ ಪ್ರಶ್ನೆಗಳು